ಸಂಪುಟ ಸರ್ಕಸ್: ದೆಹಲಿಗೆ ಸಿಎಂ

19ಕ್ಕೆೆ ಸಂಪುಟ ವಿಸ್ತರಣೆ?
ಕಳೆದ 20 ದಿನಗಳಿಂದ ಏಕಾಂಗಿ ಸಚಿವ ಸಂಪುಟ ನಡೆಸುತ್ತಿಿರುವ ಬಿಎಸ್‌ವೈ ಸಂಪುಟಕ್ಕೆೆ ಸಹೋದ್ಯೋೋಗಿಗಳ ಸೇರ್ಪಡೆಗೆ ಸೋಮವಾರ ಕಾಲ ಕೂಡಿಬರಲಿದೆಯೇ ಎಂಬ ಪ್ರಶ್ನೆೆಗೆ ಶನಿವಾರ ಉತ್ತರ ದೊರೆಯಲಿದೆ. ಶನಿವಾರ ಅಮಿತ್ ಶಾ ಭೇಟಿ ವೇಳೆ ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕರೆ ಸೋಮವಾರ 20 ಸಚಿವರು ಪ್ರಮಾಣವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತ. ಯಡಿಯೂರಪ್ಪ ಅವರ ಪಟ್ಟಿಿಯಲ್ಲಿ ಕೆಲ ಬದಲಾವಣೆಯಾದರೂ, ಒಟ್ಟಾಾರೆ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಕಡಿಮೆ. ರಾಜ್ಯ ಬಿಜೆಪಿ ಅಂದುಕೊಂಡ ಹೆಸರುಗಳಲ್ಲಿ ಕೆಲ ಬದಲಾವಣೆಗಳಾಗಬಹುದೇ ಹೊರತು ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ನೆರೆ ಪರಿಹಾರ ಮತ್ತು ಸಂಪುಟ ವಿಸ್ತರಣೆ ಸರ್ಕಸ್ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಗುರುವಾರ ರಾತ್ರಿಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಹೈಕಮಾಂಡ್ ಆದೇಶದಂತೆ ನೆರೆ ವೀಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಬಿಎಸ್‌ವೈ, ಎರಡು ಪಟ್ಟಿಗಳ ಜತೆ ಹೈಕಮಾಂಡ್ ಮುಂದೆ ಶುಕ್ರವಾರ ಬೆಳಗ್ಗೆೆ ಹಾಜರಾಗಲಿದ್ದಾಾರೆ. ನೆರೆ ಹಾನಿಯ ಸಂಬಂಧ ರಾಜ್ಯದ ಬೇಡಿಕೆಗಳ ಒಂದು ಪಟ್ಟಿ ಕೇಂದ್ರ ಸರಕಾರದ ಮುಂದೆ ಸಲ್ಲಿಕೆಯಾಗಲಿದೆ. ಇದರ ಜತೆಗೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ತಮ್ಮ ಪಟ್ಟಿಗೆ ಒಪ್ಪಿಗೆ ಪಡೆಯುವ ಕಸರತ್ತು ನಡೆಸಲಿದ್ದಾರೆ.
ಶುಕ್ರವಾರ ಬೆಳಗ್ಗೆೆ 10 ಗಂಟೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ನೆರೆ ಹಾನಿ ಪರಿಹಾರ ಸಂಬಂಧ ಮನವಿ ಸಲ್ಲಿಸಲಿದ್ದಾರೆ. ಪ್ರಧಾನಿ ಭೇಟಿ ಬಳಿಕ, ಕೇಂದ್ರ ರೈಲ್ವೆೆ ಸಚಿವರು, ವಿಮಾನಯಾನ ಖಾತೆ ರಾಜ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ರೈಲ್ವೆೆ ಯೋಜನೆ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಾಣ ನಿರ್ಮಾಣ ಸೇರಿ ರಾಜ್ಯದ ಹಲವು ಯೋಜನೆಗಳ ಬಗ್ಗೆೆ ಮಾತುಕತೆ ನಡೆಸಲಿದ್ದಾರೆ. ನಾಳೆ ರಾತ್ರಿಿ ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದು, ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಹತ್ವದ ಸಚಿವ ಸಂಪುಟ ಪುನಾರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ.
ರಾಷ್ಟ್ರಾಾಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಪಟ್ಟಿಿಯನ್ನೇ ಅಂತಿಮ ಮಾಡುವ ಸಾಧ್ಯತೆ ಕಡಿಮೆಯಿದ್ದು, ಅವರದ್ದೇ ಆದ ಮೂಲಗಳಿಂದ ತರಿಸಿಕೊಂಡ ಪಟ್ಟಿಿಗೆ ಅನುಗುಣವಾಗಿ ಬದಲಾವಣೆ ಮಾಡಲು ಸೂಚಿಸುತ್ತಾಾರೆ ಎನ್ನಲಾಗಿದೆ. ಆದರೂ, ತಮ್ಮ ಆಪ್ತರು ಸೇರಿದಂತೆ ಕೆಲವು ಹೆಸರುಗಳನ್ನು ಬಿಎಸ್‌ವೈ ಪಟ್ಟಿಿಯಲ್ಲಿ ಸೇರಿಸಿಕೊಂಡು ತೆರಳಿದ್ದು, ಇದಕ್ಕೆೆ ಅಮಿತ್ ಶಾ ಅವರ ಪ್ರತಿಕ್ರಿಿಯೆ ಹೇಗಿರಲಿದೆ ಎಂಬುದು ಕುತೂಹಲಕ್ಕೆೆ ಕಾರಣವಾಗಿದೆ.

Leave a Reply

Your email address will not be published. Required fields are marked *