5 ವರ್ಷಗಳಲ್ಲಿ ಅತಿ ಹೆಚ್ಚು ದ್ವಿದಳ ಧಾನ್ಯ ಉತ್ಪಾದನೆ: ಕೇಂದ್ರದಿಂದ ಕರ್ನಾಟಕಕ್ಕೆ 1 ಕೋಟಿ ರೂ. ಪ್ರಶಸ್ತಿ

ಬೆಂಗಳೂರು: ಕಳೆದ 5 ವರ್ಷದ ಅವಧಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ದ್ವಿದಳ ಧಾನ್ಯ ಬೆಳದ ಸಾಧನೆ ಗುರುತಿಸಿ ಕರ್ನಾಟಕಕ್ಕೆ ಭಾರತ ಸರಕಾರದಿಂದ ಪ್ರಶಸ್ತಿ ಲಭಿಸಿದೆ.

ಪ್ರಸಕ್ತ ಸಾಲಿನ ದ್ವಿದಳ ಧಾನ್ಯದ ಪ್ರಶಂಸಾ ಪ್ರಶಸ್ತಿಗೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಒಂದು ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ದ್ವಿದಳ ಧಾನ್ಯ ಬೆಳದ ಸಾಧನೆ ಮೆಚ್ಚಿ ಭಾರತ ಸರಕಾರ ಈ ಪ್ರಶಸ್ತಿ ನೀಡಿದೆ.

ರಾಜ್ಯಕ್ಕೆ ಪ್ರಶಸ್ತಿ ಬಂದಿರುವ ಕುರಿತು ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದು, ಸಿಎಂ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ಈ ಸಂಬಂಧ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರೈತರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯದ ಕೃಷಿ ವಿಜ್ಞಾನಿಗಳ ಶ್ರಮವನ್ನು ಈ ಪ್ರಶಸ್ತಿ ಗುರುತಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *