ಉತ್ತರ ಕೊರಿಯಾದಲ್ಲಿ ಈಗ ಸಾಕುನಾಯಿಗಳೇ ಮಾಂಸಾಹಾರ!

ಸಿಯೋಲ್‌: ಮಾಂಸಾಹಾರ ಪೂರೈಕೆಯ ತೀವ್ರ ಬಿಕ್ಕಟ್ಟು ತಲೆದೋರಿರುವ ಉತ್ತರ ಕೊರಿಯಾದಲ್ಲಿ ಈಗ ಸಾಕುನಾಯಿಗಳನ್ನು ಮಾಂಸಕ್ಕೆ ಬಳಸಿಕೊಳ್ಳಲು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆಡಳಿತ ಕಟ್ಟಾಜ್ಞೆ ಹೊರಡಿಸಿದೆ.

ಬಡವರು ಜಾನುವಾರುಗಳನ್ನು ಸಾಕಿ ದರೆ, ಶ್ರೀಮಂತರು ಸಾಕುನಾಯಿಗಳನ್ನು ಹೊಂದಿರುತ್ತಾರೆ. ಸಾಕು ನಾಯಿಗಳು ಪಾಶ್ಚಾತ್ಯ ಬೂಜ್ವಾ ಸಿದ್ಧಾಂತದ ಐಷಾರಾ ಮಿಯ ಸಂಕೇತ. ಈ ಕಾರಣದಿಂದಾಗಿ ಸಾಕು ನಾಯಿಗಳನ್ನು ಮಾಂಸಾಹಾರಕ್ಕೆ ಬಳಸಿ ಕೊಳ್ಳಲು ಕಿಮ್‌ ಜಾಂಗ್‌ ಉನ್‌ ನಿರ್ಧ ರಿಸಿದ್ದಾರೆ ಎಂದು ಉತ್ತರ ಕೊರಿ ಯಾದ ಪತ್ರಿಕೆಗಳು ವರದಿಮಾಡಿವೆ.

ಉತ್ತರ ಕೊರಿಯಾ ತನ್ನ ಬಹುಪಾಲು ಮಾಂಸಾಹಾರವನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಕೊರೊನಾ ಹಿನ್ನೆಲೆ ಯಲ್ಲಿ ಶೇ.90ರಷ್ಟು ಆಹಾರ ಪೂರೈಕೆ ನಿಂತು ಹೋಗಿದ್ದು, ಶೇ.60ರಷ್ಟು ಜನರ ಆಹಾರಕ್ಕೆ ತೀವ್ರ ಕೊರತೆ ಎದು ರಾಗಿದೆ. ಈ ಕಾರಣದಿಂದಾಗಿ ಶ್ರೀಮಂತರು ಹೊಂದಿರುವ ಸಾಕು ನಾಯಿಗಳನ್ನು ರೆಸ್ಟೋರೆಂಟ್‌ಗಳಿಗೆ ಬಿಟ್ಟು ಕೊಡಬೇಕು ಎಂದು ಆದೇಶಿಸಲಾಗಿದೆ.

ರಹಸ್ಯ ಸಭೆ
ಕಿಮ್‌ ಜಾಂಗ್‌ ಉನ್‌ ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಆಡಳಿತ ಪಕ್ಷದ ರಹಸ್ಯ ಸಭೆ ನಡೆಸಿದ್ದಾರೆ. ಕೊರಿಯನ್‌ ಕ್ರಾಂತಿಯ ಆಶಯದಂತೆ ಪಕ್ಷ ಬಲ ವರ್ಧನೆ, ಕೊರೊನಾದಿಂದ ಹದ ಗೆಟ್ಟಿರುವ ಆರ್ಥಿಕ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *